ಜನ್ಮಭೂಮಿ 1 - 
1928ರಿಂದ 1952ರ ವರೆಗೆ ಮಡಿಕೇರಿಯಿಂದ ಪ್ರಕಟವಾಗುತ್ತಿದ್ದ ಕನ್ನಡ ವಾರಪತ್ರಿಕೆ. ಸ್ಥಾಪಕ ಸಂಪಾದಕ, ಪ್ರಕಾಶಕ ಬಿ.ಎ. ಬೆಳ್ಯಪ್ಪ. ಬೆಳ್ಯಪ್ಪನವರ ನಿಧನದೊಂದಿಗೆ ಪತ್ರಿಕೆಯೂ ನಿಂತುಹೋಯಿತು. ತನ್ನ ಕಾಲದ ರಾಜಕೀಯ ವಿಚಾರಗಳಿಗೆ ಮಹತ್ತ್ವ ನೀಡುತ್ತಿದ್ದ ಇದು ಕೊಡಗಿನ ಅಭಿವೃದ್ಧಿಗಾಗಿ ದುಡಿಯಿತು. 1947ರ ಸ್ವಾತಂತ್ರ್ಯಾ ನಂತರ ಇಲ್ಲಿ ಅಧಿಕಾರಕ್ಕೆ ಬಂದ ಮಂತ್ರಿಮಂಡಲದ ಮುಖಪತ್ರದಂತೆ ಅದರ ಧೋರಣೆಗಳನ್ನು ಎತ್ತಿಹಿಡಿಯಿತು. ರಾಜ್ಯ ಪುನರ್ವಿಂಗಡಣೆಯ ಸಮಯದಲ್ಲಿ ಮೈಸೂರಿನಲ್ಲಿ ಕೊಡಗಿನ ವಿಲೀನಿಕರಣವನ್ನು ಪತ್ರಿಕೆ ಅನುಮೋದಿಸಿತು. 						(ಎಂ.ಎಸ್.ಎಂಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ